“ಸಮಾಜದಲ್ಲಿ ಇರುವ ಜಾತಿ ಪದ್ಧತಿ ಹಿಂದೂ ಧರ್ಮದ ದೌರ್ಬಲ್ಯವಲ್ಲ- ಜಯಪ್ರಸಾದ್ ಪೈಸಾರಿ”

ಸಂಘಟನೆಗಳು ವ್ಯಕ್ತಿಗಳನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡುತ್ತದೆ. ಕಲೆ ಜನರ ಮನಸ್ಸಿಗೆ ಹಿತವನ್ನು ನೀಡುತ್ತದೆ. ಒತ್ತಡದ ಜೀವನವನ್ನು ಕಳೆಯಲು ವ್ಯಕ್ತಿಗೆ ನೆಮ್ಮದಿ ಅಗತ್ಯ ಎಂದು ಚಿತ್ರ ನಟ ಕಾರ್ತಿಕ್ ಬಂಜನ್ ಹೇಳಿದರು.

ಆದಿತ್ಯವಾರ ಪುರಭವನದಲ್ಲಿ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ,ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತ್ತು ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಜಯಪ್ರಸಾದ್ ಪೈಸಾರಿ
ಸಮಾಜದಲ್ಲಿ ಇರುವ ಜಾತಿ ಪದ್ಧತಿ ಹಿಂದೂ ಧರ್ಮದ ದೌರ್ಬಲ್ಯವಲ್ಲ ಎಂದು ಹೇಳಿದರು.

kulal

ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಿ. ಎಸ್. ಕುಲಾಲ್, ಮಂಗಳೂರಿನ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್, ಚಲನಚಿತ್ರ ಕಲಾವಿದ ಲತೀಶ್ ಮತ್ತು ವಾಹಬ್ ಸಲೀಂ ಸಂಘದ ಕಾರ್ಯದರ್ಶಿ ಚಂದ್ರಹಾಸ ಕುಲಾಲ್ ಪದವು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಎಂಡೋ ಪೀಡಿತಡಿತರಿಗೆ ಅಕ್ಕಿ ಹಾಗೂ ಆನಾರೋಗ್ಯ ಒಳಗಾಗಿರುವ ಹಲವರಿಗೆ ಸಂಘದ ವತಿಯಿಂದ ಧನ ಸಹಾಯ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಸ್ವಾಗತಿಸಿ, ನವೀನ್ ಕುಮಾರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.